Tuesday, February 5, 2008

ಹೊರದೇಶದ ಹೈಟೆಕ್ ಸಾಲಗರ ನನ್ನ ಪತಿರಾಯ

ಪ್ರೀತಿಯ ಶಂಕರ್,
ಬಹುಶಃ ಇದು ನನ್ನ ಕಟ್ಟ ಕಡೆಯ ಪತ್ರ ಅನಿಸುತ್ತೆ. ಈ ಪತ್ರ ನಿನ್ನ ಆತ್ಮಕ್ಕೆ ತಾಕಲಿ ಆದ್ರೆ ಒಂದು ಹನಿ ಕಣ್ಣಿರು ಈ ಪತ್ರದ ಮೇಲೆ ಬೀಳಲಿ ಅಂತ ಈ ಕೊನೆಯ ಪತ್ರದ ಮೊದಲನೆ ಪ್ಯಾರಾ ಬರೆಯಲು ಶುರು ಮಾಡಿದ್ದೇನೆ ಡಿಯರ್. ಏನಿದು ಹೊಸ ವಿಧಾನ ಒಂದೇ ಮನೇಲಿ ಇದ್ದರು ಯಾಕೆ ಈ ಪತ್ರದ ಸಂದೇಶ ಅಂತೀಯ. ಏನು ಮಾಡಲಿ ಶಂಕರ ನನ್ನ ಎಲ್ಲ ಭಾವನೆಗಳನ್ನ ನಿನ್ನ ಹತ್ತಿರ ಹೇಳ್ಕೋಬೇಕು ಅಂತ ಬಂದಾಗ ಆ ನಿನ್ನ ಮಾತುಗಳು ನನ್ನ ಬಾಯಿಗೆ ಮನಸಿಗೆ ಬೀಗ ಜದ್ದಿಯುತ್ತೆ.
ಇವನು ಗೆಳೆಯನಲ್ಲ ಗೆಳತಿ ನಾನು ಮೊದಲೇ ಅಲ್ಲ
ಇವನು ಇನಿಯನಲ್ಲ ತುಂಬ ಸನಿಹ ಬಂದಿಹನಲ್ಲ
ಇಷ್ಟುಹೊತ್ತಿಗೆ ಆಗಲೇ ನಿನ್ನ ಮನಸಿನಲ್ಲಿ ಇವಳಿಗೆ ನಾನು ಏನು ಮೋಸ ಮಾಡಿದೆ ಅನ್ನೋ ಪ್ರೆಶ್ನೆ ಕಾಡುತ್ತ ಇರುತ್ತೆ. ಈ ಪತ್ರ ಓದುತ್ತಾ ನಾನು ಒಬ್ಬಳು ಹುಚ್ಚಿ ಅಂತ ಅನಿಸುತ್ತೆ.ಹೌದು ಕಣೋ ನಾನು ಹುಚ್ಚಿ. ಅಪ್ಪ ಅಮ್ಮ ಬಂಧು ಬಳಗ ಗೆಳೆಯರು ಎಲ್ಲರನ್ನು ಬಿಟ್ಟು ನೀನೆ ಸರ್ವಸ್ವ ಅಂತ ಗೊತ್ತಿಲ್ಲದೆ ಇರೋ ಈ ಅಮೇರಿಕಾಗೆ ನಿನ್ನ ಜೊತೆ ಬಂದಿರೋ ಹುಚ್ಚಿ.
ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕ್ಕೆ ನಿನ್ನನು ....
ಲೇ ಹುಡುಗ ನಾವು ಕಾಲೇಜ್ ಅಲ್ಲಿ ಇದ್ದಾಗ ಎಷ್ಟು ಪ್ರೀತಿಸ್ತಾ ಇದ್ವಿ . ಒಬ್ಬರನ್ನೋಬರು ಯಾವಾಗಲು ಅಂಟಿ ಕೊಂಡೆ ಇರುತ್ತಾ ಇದ್ವಿ. ನನ್ನ birthday, valentines day, ನಿನ್ನ birthday ಅಷ್ಟು ಯಾಕೆ ನೀನು propose ಮಾಡಿದ ದಿನ ಕೂಡ ನೆನಪಿನಲ್ಲಿ ಇಟ್ತ್ಕೊಂಡು proposal day ಅಮೇಲೆ ನಾನು ನಿನ್ನ ಪ್ರೀತಿನ ಒಪ್ಪಿಕೊಂಡ ದಿವಸನಾ accept day ಅಂತ ಕಾರಣನ ಹುಡುಕಿ ಕೊಂಡು celebrate ಮಾಡುತ್ತ ಇದ್ದ್ವಿ.ಅಷ್ಟು ಸನಿಹ ಇರೋಕೆ ಬಯಸ್ತಾ ಇದ್ವಿ ಇವತ್ತು ಅದರ ಎಳ್ಳು ಅಷ್ಟು ಪ್ರೀತಿ ನಮ್ಮಿಬ್ಬರ ನಡುವೆ ಇಲ್ಲ ಕಣೋ. ಇವತ್ತು ನೀನು ಆಯಿತು ನಿನ್ನ ಕೆಲ್ಸ ಆಯಿತು ದುಡ್ಡಿನ ಹಿಂದೆ ಒಡೋ ಬಿಸಿಲು ಕುದುರೆ ಆಗಿದ್ದಿಯ.ನನ್ನ birthday, wedding aniversary ಆದರು ನೆನಪಿದೆಯೆ ಹ ಹ ಹ ನಾನು ಇರೋದೇ ನೆನಪಿಲ್ಲ ನಿನಗೆ. ದುಡ್ಡು ಅಗತ್ಯ ಕಣೋ ಅನಿವಾರ್ಯ ಅಲ್ಲ ಜೀವನಕ್ಕೆ ಅನಿವಾರ್ಯ ಈ ಪ್ರೀತಿ. ಅವತ್ತು ನಿನ್ನ ಹತಿರ ಪಾಕೀಟು ಹಣ್ಣ ಇದ್ದಾಗ ನೀನು ಹಾಡುತ್ತಿದ್ದ ಹಾಡೇ ಹಿತವಾಗಿ ಇತ್ತು...
ಬಡವನಾದರೆ ಏನು ಪ್ರಿಯೆ
ಕೈ ತುತ್ತು ತಿನಿಸುವೆ
ಬದವನಾದರೆ ಏನು ಪ್ರಿಯೆ
ಕೈ ತುತ್ತು ತಿನಿಸುವೆ

ಎದೆಯ ತುಂಬ ಒತ್ತಿಕೊಂಡು
ಮುತ್ತು ಮಳೆಯ ಸುರಿಸುವೆ
ಎದೆಯ ತುಂಬ ಒತ್ತಿಕೊಂಡು
ಮುತ್ತು ಮಳೆಯ ಸುರಿಸುವೆ

ಸರಿ ನಿಮ್ಮ ಅಂತ ಗಂಡಸರು ಇಷ್ಟೆಲ್ಲಾ 27X7ಅಂತ software companyಗಳಲ್ಲಿ ಹೊರದೇಶಕ್ಕೆ ಬಂದು ದುಡಿದು ಗಳಿಸಿದ್ದೇನು.ನಿನ್ನಥರ ಮೈ ತುಂಬ ಸಲ. ಮನೆ installmentu, ಕಾರು installmentu ಕೊನೆಗೆ ಮನೆ ಉಪಕರಣಗಳು installmentu. ಮತ್ತೆ ಈ ಹೊರದೇಶದ ವಾಸ ನನಗೆ ಉಸಿರು ಕಟ್ಟಿಸಿದೆ. ನಾನು ಮರಳಿ ನನ್ನ ದೇಶಕ್ಕೆ ಹೋಗುತ್ತೇನೆ ಅಪ್ಪ ಅಮ್ಮ ಜೊತೆಗೆ ಸ್ವಚ ಗಾಳಿಗೆ ಉಸಿರುನ್ನು ಉಳಿಸಿಕೊಳ್ಳುತ್ತೇನೆ. ನೀನು ನಿನ್ನ ಈ ಜೀವನೆ ಇಲ್ಲದೆ ಇರ್ರೋ ದುಡ್ಡು ಮನೆ ಕಾರು ಎಲ್ಲದರ ಜೊತೆ ಹಾಯಾಗಿ ಇರು. Good bye for ever....

ಇತಿ ನಿನ್ನವಳು
ಶ್ವೇತ